ಒಂದು ಮಾತು

ಡಾ. ಕೆ. ಮುರಳಿಧರ
ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕನ್ನಡ ಸರ್ವವ್ಯಾಪಿಯಾಗಬೇಕು ಎನ್ನುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಘೋಷವಾಕ್ಯ. ಭಾಷೆ ಬೆಳೆಯಬೇಕಾದಲ್ಲಿ ಹೊಸದೆಲ್ಲವೂ ಹರಿದು ಬರಲಿ ಎನ್ನುವುದು ಅದರ ನಿಲುವಾಗಬೇಕು. ಎರಡು ಸಾವಿರ ವರ್ಷಗಳ ಇತಿಹಾಸದ ನಮ್ಮ ಕನ್ನಡ ಭಾಷೆ, ಹೊಸತೆಲ್ಲವನ್ನೂ ತನ್ನದಾಗಿಸಿಕೊಳ್ಳುತ್ತಲೇ ಬೆಳೆದಿದೆ. ಹಾಗಾಗಿಯೇ ಉಳಿದಿದೆ, ಉಳಿಯುತ್ತದೆ.

ತಂತ್ರಜ್ಞಾನದ ಆವಿಷ್ಕಾರಗಳಿಗೆ ಸಂವಾದಿಯಾಗಿ, ಸಮರ್ಥವಾದ ನುಡಿಗಟ್ಟುಗಳನ್ನು ರೂಢಿಸಿಕೊಳ್ಳುವ ಮೂಲಕ ಉತ್ತರಿಸಬೇಕಾದ್ದು, ಇಂದು ಎಲ್ಲ ದೇಶಭಾಷೆಗಳ ಅನಿವಾರ್ಯ. ಕಂಪ್ಯೂಟರ್‌ನದ್ದೇ ಇಂದು ಹೊಸ ಭಾಷೆಗಳು, ಹೊಸ ಸಂಕೇತಗಳು ಬದುಕನ್ನು ಆವರಿಸಿಕೊಳ್ಳುತ್ತಿವೆ. ಕನ್ನಡ ಇಲ್ಲಿ ಸಮರ್ಥವಾದಲ್ಲಿ, ಅದರ ಸಾಮರ್ಥ್ಯಕ್ಕೆ ಕೊನೆಯಿರುವುದಿಲ್ಲ.

ಈ ನಿಟ್ಟಿನಲ್ಲಿಯೇ ಹದಿನೈದು ವರ್ಷಗಳಷ್ಟು ಹಿಂದೆಯೇ ಪ್ರಾಧಿಕಾರ ತಂತ್ರಜ್ಞಾನದ ಪರಿಕಲ್ಪನೆಗಳನ್ನು ವಿವರಿಸುವ ಕಂಪ್ಯೂಟರ್ ಪದವಿವರಣ ಕೋಶವನ್ನು ಪ್ರಕಟಿಸಿತ್ತು. ಇಂದು ಶ್ರೀ ಟಿ. ಜಿ. ಶ್ರೀನಿಧಿಯವರಂತಹ ಪ್ರತಿಭಾನ್ವಿತ ಸಂಪಾದಿಸಿರುವ ಕಂಪ್ಯೂಟರ್ - ತಂತ್ರಜ್ಞಾನ ಪದವಿವರಣ ಕೋಶವನ್ನು ಪ್ರಕಟಿಸುವ ಮೂಲಕ ತನ್ನ ಭಾಷಾ ಬದ್ಧತೆಯನ್ನು ಪುನಃ ಪ್ರದರ್ಶಿಸಿದೆ.

ಇದನ್ನು ಕಂಪ್ಯೂಟರ್ ಬಳಸುವ ಎಲ್ಲರೂ ಓದಬೇಕು. ಮನನ ಮಾಡಿಕೊಳ್ಳಬೇಕು. ತನ್ಮೂಲಕ ಹೊಸ ಕನ್ನಡ ಬಳಕೆಗೆ ಮುಂದಾಗಬೇಕು. ಕನ್ನಡ ಭಾಷೆ ಶತಮಾನಗಳು ಕಳೆದರೂ ಉಳಿಯಬೇಕಾದ್ದು ಹೀಗೆಯೇ.
 

ದಯಮಾಡಿ ಗಮನಿಸಿ

ದಯಮಾಡಿ ಗಮನಿಸಿ
ಈ ತಾಣದಲ್ಲಿರುವ ಮಾಹಿತಿಯನ್ನು ಕ್ರಿಯೇಟಿವ್ ಕಾಮನ್ಸ್‌ನ CC BY-NC-ND 4.0 ಪರವಾನಗಿಯಡಿ ನೀಡಲಾಗುತ್ತಿದೆ. ಈ ಪರವಾನಗಿ ಕುರಿತ ಹೆಚ್ಚಿನ ಮಾಹಿತಿಗಾಗಿ ಮೇಲಿನ ಚಿತ್ರವನ್ನು ಕ್ಲಿಕ್ ಮಾಡಿ.

ಡೌನ್‌ಲೋಡ್

ಡೌನ್‌ಲೋಡ್
ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶದ ಪಿಡಿಎಫ್ ಆವೃತ್ತಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ.